• Home
  • Politics
  • Sports
  • Trending
  • Entertainment
  • Book Reviews
  • Login
  • Register
Clever Read.
Advertisement
ADVERTISEMENT
No Result
View All Result
  • Home
  • Politics
  • Sports
  • Trending
  • Entertainment
  • Book Reviews
No Result
View All Result
Clever Read.
No Result
View All Result
Home Authors Interview

An Interview with Author Prashna Narayan Rai

Clever Read by Clever Read
April 12, 2023
in Authors Interview
0

Katheyadhale Kavayathree

14
SHARES
288
VIEWS

1.ನಿಮ್ಮ ಹಿನ್ನೆಲೆಯ ಬಗ್ಗೆ ನಮಗೆ ಏನಾದರೂ ತಿಳಿಸಿ.

ನಾನು ಸುಳ್ಯ ತಾಲೂಕಿನ  ಮರ್ಕಂಜ ಗ್ರಾಮದ ಕೃಷಿ ಪ್ರಧಾನ  ಮಧ್ಯಮ  ಕುಟುಂಬಕ್ಕೆ ಸೇರಿದವಳು.ತಂದೆ ನಾರಾಯಣ  ರೈ.ತಾಯಿ ಶಶಿಕಲಾ.ನಾನು ಇಂಜನಿಯರಿಂಗ್ ಪದವೀಧರೆ. ಹಾಗೆಯೇ ಜೀವನೋಪಾಯಕ್ಕಾಗಿ ಖಾಸಾಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತಿರುವೆ.

  1. ನಿಮ್ಮ ಬರವಣಿಗೆಯ ಪ್ರಯಾಣವನ್ನು ಯಾವಾಗ ಮತ್ತು ಹೇಗೆ ಆರಂಭಿಸಿದ್ದೀರಿ?

ನಾನು ಪ್ರೌಢಶಾಲೆಯಲ್ಲಿ ಕಲಿಯುತಿರುವಾಗ ನನಗೆ ಈ ಬರವಣಿಗೆಯ ಹುಚ್ಚು ಶುರುವಾಯಿತು.ನಾನು ಕನ್ನಡ ಮಾಧ್ಯಮ  ವಿದ್ಯಾರ್ಥಿನಿ.ಮಾತೃಭಾಷೆಯಲ್ಲಿ ಕಲಿಯುವಾಗ ವಿಷಯಗಳನ್ನು ಕಂಠಪಾಠ ಮಾಡುವ ಬದಲಾಗಿ ಅರ್ಥ  ಮಾಡಿಕೊಳ್ಳಲು ಪ್ರಯತ್ನ  ಮಾಡುತ್ತೇವೆ.ಇದೇ ನನ್ನನ್ನು  ಬರವಣಿಗೆಯತ್ತ ಸೆಳೆಯಿತೇನೋ ಎಂದೆನಿಸುತ್ತದೆ.

  1. ನಿಮ್ಮ ಪುಸ್ತಕ ಯಾವುದರ ಬಗ್ಗೆ?

ಈ ಪುಸ್ತಕ  ಅಳಿಯುತಿರುವ  ಪ್ರಕೃತಿಯ ಮನದ ಮಾತು.ಹಾಗೆಯೇ ಇದರಲ್ಲಿ ಬಹಳಷ್ಟು ಹೊಸ ವಿಷಯಗಳಿವೆ.

  1. ಈ ಪುಸ್ತಕವನ್ನು ಬರೆಯಲು ನಿಮ್ಮನ್ನು ಯಾವುದು ಪ್ರೇರೇಪಿಸಿತು?

ಪ್ರಕೃತಿ ನನಗೆ ಬಹಳ ಪ್ರಿಯವಾದ  ವಿಷಯ.ಆಧುನಿಕತೆಯಿಂದ ಅವನತಿಯತ್ತ  ಸಾಗುತಿರುವ ಪ್ರಕೃತಿ ಹಾಗೂ ಸುತ್ತಮುತ್ತ ನಡೆಯುವ ಅದೆಷ್ಟೋ ಘಟನೆಗಳು ಈ ಕಾದಂಬರಿಗೆ ಪ್ರೇರಣೆಯಾಯಿತು.

  1. ನಿಮ್ಮ ಬರವಣಿಗೆಯ ಪೂರ್ವ ಅನುಭವ ಹೇಗಿತ್ತು? ಏನು ನಿಮ್ಮನ್ನು ಒತ್ತಾಯಿಸಿತು?

ನಾನು ಬರಿ ಕವನ ಹಾಗೂ ಲೇಖನಗಳನ್ನು ಬರೆಯುತಿದ್ದೆ.ನನಗೆ ಕಾದಂಬರಿ ಬರೆಯಬಲ್ಲೆ ಎಂಬ ಸಣ್ಣ  ಊಹೆ ಕೂಡ ಇರಲಿಲ್ಲ.ಪುಟ್ಟಣ್ಣ ಕಣಗಾಲ್ ಚಲನ ಚಿತ್ರ ಸಂಸ್ಥೆಯಲ್ಲಿ ಚಲನ ಚಿತ್ರ  ನಿರ್ದೇಶನ ಕೋರ್ಸ್ನ ಸಮಯದಲ್ಲಿ ನನ್ನ ಗುರುಗಳು ಹಾಗೂ ಚಲನಚಿತ್ರ  ನಿರ್ದೇಶಕರಾದ ಸೇನ್ ಪ್ರಕಾಶ್ ರವರು ನನಗೆ  ಸಿನಿಮಾ ಕಥೆಗಳನ್ನು ಬರೆಯಲು ಮಾರ್ಗದರ್ಶನ  ನೀಡಿದರು. ಮುಂದಿನ  ದಿನಗಳಲ್ಲಿ ಅದು ನನ್ನನು  ಕಾದಂಬರಿ ಬರೆಯಲು ಪ್ರೇರೇಪಿಸಿತು .ಹಾಗೆಯೇ ನನ್ನ ಮನೆಯ ಪ್ರತಿ ಸದಸ್ಯರು,ನನ್ನ ಗುರುವೃಂದ  ಸ್ನೇಹಿತರು ಹಾಗೂ ಸಾಮಾಜಿಕ  ಜಾಲತಾಣದ ಸಾಹಿತ್ಯ  ಪ್ರೇಮಿಗಳ ಪಾಲು ಕೂಡ ಇದರಲ್ಲಿ ಬಹಳಷ್ಟು ಇದೆ..

  1. ನಿಮ್ಮ ಬರವಣಿಗೆಯ ಅನುಭವ ಹೇಗಿತ್ತು? ನಯವಾಗಿತ್ತೆ ಅಥವಾ ಕಷ್ಟಕರವಾಗಿತ್ತೇ?

ನನ್ನ  ಮನಸಿನಲ್ಲಿ ಯಾವುದೇ ಒಂದು ಕೆಲಸ ಮಾಡುವ  ಯೋಚನೆ ಬಂದಾಗ ನಾನದನ್ನು ಯೋಜನೆಯನ್ನಾಗಿ ಮಾಡುತ್ತೇನೆ.ಕಷ್ಟ  ನಷ್ಟದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.ನಾನು ಮಾಡುವ ಪ್ರತಿಯೊಂದು ಕೆಲಸವು ನನಗೆ ಮನರಂಜನೆಯನ್ನು ಕೊಡುತ್ತದೆ.ಹಾಗೆಯೇ ನಾನು ಮಾಡಲಿಚ್ಛಿಸದ ಕೆಲಸವನ್ನು ಯಾರು ಬಂದು ಒತ್ತಾಯಿಸಿದರೂ ನಾನು ಮಾಡುವುದಿಲ್ಲ.

  1. ನಿಮ್ಮ ಪ್ರಕಾಶಕರು ಎಷ್ಟು ಕೊಡುಗೆ ನೀಡಿದ್ದಾರೆ? ಅವರು ನಿಮಗಾಗಿ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದಾರೆಯೇ?

ಹೌದು.ಇಲ್ಲಿ ಪ್ರಕಾಶಕರ ಪಾತ್ರ  ಬಹಳ ಮುಖ್ಯವಾದದು.ನನ್ನ ಮೊದಲ ಕಾದಂಬರಿಯಾಗಿರುವ ಕಾರಣ ನನಗೆ ಪುಸ್ತಕ ನಿರ್ಮಾಣದ ಅನುಭವವಿರಲಿಲ್ಲ.ಪ್ರಕಾಶಕರ ಸಹಕಾರದಿಂದ  ನನ್ನ  ಕಾದಂಬರಿ ಪುಸ್ತಕವಾಯಿತು. ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

  1. ನೀವು ಈ ಪುಸ್ತಕವನ್ನು ಬರೆಯುವುದಕ್ಕೆ ನಿಮ್ಮ ಕುಟುಂಬ ಮತ್ತು ಸ್ನೇಹಿತರ ಪ್ರತಿಕ್ರಿಯೆ ಏನು?

ಮೊದಲಿಗೆ ನನ್ನ  ಸುತ್ತಲಿನವರು “ಈಗ ಪುಸ್ತಕ  ಟ್ರೆಂಡಿಂಗ್ನಲ್ಲಿ ಇಲ್ಲ.ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆಂಗ್ಲ  ಮಾಧ್ಯಮದಲ್ಲಿ ಅಧ್ಯಯನ ಮಾಡುತಿರುವವರು.ಕನ್ನಡ ಪುಸ್ತಕ  ಯಾರು ಓದುತ್ತಾರೆ”ಎಂದರು. ಇದು ನಿಜ ಕೂಡ.ಆದರೆ ನನಗೆ ಕ್ಷಣಕಾಲಕ್ಕೆ ಬದಲಾಗುತಿರುವ ಟ್ರೆಂಡ್ ಮೇಲೆ ನಂಬಿಕೆಯಿಲ್ಲ.ನಾನು ಯುಗಾಯುಗಾಂತರದಿಂದ ಬೆಳೆದು ಬಂದಿರುವ  ಕೆಲವೊಂದು ಸಂಸ್ಕೃತಿ ಹಾಗೂ ಸಂಪ್ರದಾಯದ ಮೇಲೆ ನಂಬಿಕೆ ಇಡುತ್ತೇನೆ.ನನ್ನ ಪ್ರಕಾರ ಪುಸ್ತಕಗಳು ಟ್ರೆಂಡ್ ಅಲ್ಲ.ಅದು ನಮ್ಮ ಸಂಸ್ಕೃತಿ.

  1. ಈ ಪ್ರಯಾಣದಲ್ಲಿ ನಿಮ್ಮನ್ನು ಬೆಂಬಲಿಸಿದ ಜನರನ್ನು ಉಲ್ಲೇಖಿಸಿ.

ಬಹಳಷ್ಟು ಜನರಿದ್ದಾರೆ.ಅವರಿಗೆಲ್ಲ ಪುಸ್ತಕದಲ್ಲಿ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದ್ದೇನೆ.

  1. ನಿಮ್ಮ ಪುಸ್ತಕ ಓದುಗರ ಮೇಲೆ ಹೇಗೆ ಪ್ರಭಾವ ಬೀರಲಿದೆ?

ಇದೊಂದು ಪ್ರಯೋಗಿಕ ಕಾದಂಬರಿ.ನಾನು ಓದುಗರ ವಿಮರ್ಶೆಗಾಗಿ ಕಾಯುತಿದ್ದೇನೆ.

  1. ನಕಾರಾತ್ಮಕ ಕಾಮೆಂಟ್‌ಗಳು ಯಾವುದಾದರೂ ಇದ್ದರೆ ನೀವು ಹೇಗೆ ವ್ಯವಹರಿಸುತ್ತೀರಿ?

ನಾನು  ಹೊಗಳಿಕೆ ತೆಗಳಿಕೆ ಇವೆರಡರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ.ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬುದನ್ನು ನಂಬಿದವಳು.ಆ ನಕಾರಾತ್ಮಕ  ಕಮೆಂಟ್ ನಿಜವಾಗಿಯೂ ನನ್ನ ಬೆಳವಣಿಗೆಯನ್ನು ಕುಂಟಿತ ಮಾಡುವುದಾದರೆ ಬದಲಾಗಿ ಮುಂದೆ ಸಾಗುವುದರಲ್ಲಿ ಯಾವ ಬೇಸರವೂ ಇಲ್ಲ. ಹಾಗೆಯೇ ಯಾವುದೇ ನಕಾರಾತ್ಮಕ  ಕಾಮೆಂಟ್ಗಳಿಗೆ ನನ್ನ  ಆತ್ಮವಿಶ್ವಾಸವನ್ನು ಕುಗ್ಗಿಸುವ ಶಕ್ತಿ ಕೂಡ ಇಲ್ಲ.ಸೋಲೋ ಗೆಲುವೊ ಮುಂದೆ ಬದುಕಿದೆ ಅಷ್ಟೇ.

  1. ನಿಮ್ಮ ಸಾಹಿತ್ಯಿಕ ಮಾರ್ಗದರ್ಶಕರು ಮತ್ತು ರೋಲ್ ಮಾಡೆಲ್‌ಗಳು ಯಾರು?

ನನಗೆ ರೋಲ್ ಮಾಡೆಲ್ ಗಳು ಅಂತ  ಯಾರು ಇಲ್ಲ. ಯಾಕೆಂದರೆ ನಾನು ನನ್ನ  ಸ್ವಂತ ಬರಹದ ಶೈಲಿಯನ್ನೈ ದಿನೇ ದಿನೇ ಉತ್ತಮಗೊಳಿಸುವ ಪ್ರಯತ್ನದಲ್ಲಿದ್ದೇನೆ.ಹಾಗೆಯೇ ಕಲಿಕೆ ನಿರಂತರ.ನಮ್ಮ  ಕರ್ನಾಟಕದಲ್ಲಿ ಖಂಡಿತವಾಗಿಯೂ ಇಲ್ಲಿಯವರೆಗೆ ಸಾಹಿತಿಗಳಿಗೆ ಬರಗಾಲ ಬಂದಿಲ್ಲ. ಮುಂದೆಯೂ ಬರಬಾರದೆಂಬುದು ನನ್ನ ಆಶಯ.ನಾನು ಕನ್ನಡದ ಪ್ರತಿಯೊಬ್ಬ ಬರಹಗಾರನಿಂದ ಕೂಡ ಕಲಿಯಲು ಇಷ್ಟಪಡುತ್ತೇನೆ.ಹಾಗೆಯೇ ಅವರನ್ನು ಹೃದಯ ಪೂರ್ವಕವಾಗಿ ಗೌರವಿಸುತ್ತೇನೆ.

  1. ನಿಮ್ಮ ಮುಂಬರುವ ಬರವಣಿಗೆಯ ಉದ್ಯಮಗಳು ಯಾವುವು?

ಕೆಲವೊಂದು ಯೋಚನೆಗಳಿವೆ.ಅವುಗಳು ಯೋಜನೆಗಳಾದಾಗ ಬಹಿರಂಗಪಡಿಸುವೆ.

  1. ನಮ್ಮ ಮಹತ್ವಾಕಾಂಕ್ಷಿ ಬರಹಗಾರರಿಗೆ ಏನಾದರೂ ಸಲಹೆ ಇದೆಯೇ?

ಇಂದಿನ ಜನಾಂಗದ ಯುವಕರು  ವಿದ್ಯಾವಂತರೂ ಹಾಗೂ ಬುದ್ದಿವಂತರು. ಪ್ರತಿಯೊಬ್ಬರಲ್ಲೂ ತಮ್ಮದೆ ಆದ ಸ್ವಂತ ಯೋಜನೆಗಳಿರುತ್ತದೆ. ನಾವು ಸಲಹೆಕೊಟ್ಟು ಆ ಯೋಜನೆಗಳನ್ನು ಕೆಡಿಸುವ ಬದಲು ಅವರ ಯೋಜನೆಗಳು ಅವರಿಷ್ಟದ  ಹಾಗೆ ಕಾರ್ಯರೂಪಕ್ಕೆ ಬರಲು ಸಹಾಯ ಮಾಡುವುದು ಉತ್ತಮವೆಂದು ನನ್ನ ಅಭಿಪ್ರಾಯ.ಆಗ ನಾವು ಸಾಹಿತ್ಯದಲ್ಲೂ  ವೈವಿಧ್ಯತೆಯನ್ನು ಕಾಣಬಹುದು.

Previous Post

Pharma Factory: A Journey Towards Operational Excellence in Pharma Manufacturing

Next Post

New National Education Policy implemented considering requirements of modern and developed India PM Modi

Clever Read

Clever Read

Related Posts

Authors Interview

My Observation on Tension and At(tension): An Interview with Author Anitha 

by Clever Read
June 2, 2023
Authors Interview

“Author Interview: Exploring the Poetry and Thoughts of Priyanshu Goyal in ‘Waaqif'”

by Clever Read
May 15, 2023
Authors Interview

“Exploring the Power of a Well-Balanced Mind: An Interview with Author Priya Narayan”

by Clever Read
May 8, 2023
Authors Interview

“Behind the Pages: An Author Interview with Rithvi S, Author of Journey with Brian, Alice and Lisa”

by Clever Read
May 4, 2023
Authors Interview

British Indian actor-writer Meera Syal honoured with BAFTA Fellowship

by Clever Read
May 1, 2023
Next Post

New National Education Policy implemented considering requirements of modern and developed India PM Modi

ADVERTISEMENT

Premium Content

Book Review: Connecting Fables with the Corporate World: Insights from the Career of an IIMA Alumnus

February 24, 2023

74-year-old suspect extradited from Pakistan over policewoman’s murder in UK

April 13, 2023

Karnataka elections 2023: Congress announces list of 61 election observers to oversee election preparations

April 15, 2023

Browse by Category

  • Astrology
  • Authors Interview
  • Book Fair
  • book launch events
  • Book Reviews
  • Business
  • Cooking
  • crime
  • defense
  • education
  • Entertainment
  • Fashion
  • Food
  • Health
  • Lifestyle
  • Parenting & Children
  • Politics
  • pr
  • Self Help
  • self publishing
  • Social media trends
  • Sports
  • Technology & Media
  • Travel
  • Trending
  • World

Browse by Tags

army Arpita Mukherjee Arvind Kejriwal BJP Chatterjee Congress covid Draupadi Murmu Google News Gotabaya Rajapaksa House India India News india news today Japan Joe Biden Khalistan Tiger Force Lok Sabha Mexico Murmu myanmar Narendra Modi NIA Nupur Sharma Oppose Parliament Partha Chatterjee Rahul Gandhi Rajya Sabha Ram Nathi Ranil Wickremesinghe rape Sri Lanka teen the path of fire The Tim Ferris Show TMC to arrest today's fresh news Today's news Uddhav Thackeray ukraine United Nations Yashwant Sinha yoshihiko isozakio
Politics

Railway disaster. Odisha train accident: PM Modi holds meet to review situation

by Clever Read
June 3, 2023
0

Railway disaster. Odisha train accident: PM Modi holds meet to review situation Prime Minister Narendra Modi held a meeting on Saturday...

Read more

Indian-American Ajay Banga Takes Over As World Bank President

June 3, 2023

Odisha train crash: Railways launches high-level probe, says anti-train collision system wasn’t available on route

June 3, 2023

Javed Akhtar’s Prediction For 2024 US Presidential Election

June 3, 2023

Help Desk Set Up At Bengaluru Railway Station To Assist Odisha Train Accident Victims

June 3, 2023
Clever Read

Get the latest information on news, trending topics, books, and social media trending reels.

© 2022 Cleverread - Clever Fox Publishing.

No Result
View All Result
  • Home
  • Books
    • Book Reviews
    • Trending
    • Astrology
    • Business
    • Fiction & Literature
    • Parenting & Children
    • Self Help
    • Cooking
  • Entertainment
  • Social Media Trends
  • PR
  • Interviews
  • News
  • Contact us
  • About us

© 2022 Cleverread - Clever Fox Publishing.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Are you sure want to unlock this post?
Unlock left : 0
Are you sure want to cancel subscription?